ಕೌಮುದಿಯ ಒಡವೆಗಳು
(ಶಾಲಾ ಸಮವಸ್ತ್ರ ಧರಿಸಿದ ಇಬ್ಬರು ಹದಿನೈದು ವಯಸ್ಸಿನ ಹುಡುಗಿಯರು, ಚೆಂಡು ಆಡುತ್ತಿರುವ ಅದೇ ವಯಸ್ಸಿನ ಸಮವಸ್ತ್ರದ ಶಾಲಾ ಹುಡುಗನ ಹತ್ತಿರ ಲಗುಬಗೆಯಿಂದ ಬಂದು ಮಾತಾಡುತ್ತಾರೆ)
ಸುಮನ:-ಏ ಕಿಶೋರ್, ಇನ್ನೂ ಬಾಲ್ ಆಡ್ತಾ ನಿಂತಿದ್ದೀಯಲ್ಲೋ!? ಬಾರೋ, ಸ್ಕೂಲಲ್ಲಿ ನಡಿಸ್ತಿರೋ ಸ್ವಾತಂತ್ರ್ಯ ದಿನಾಚರಣೆಗೆ ಹೋಗಕ್ಕೆ ಹೊತ್ತಾಯ್ತು.
ಕಿಶೋರ್:-(ಸುಮನಳತ್ತ ಒಮ್ಮೆ ಕೀಟಲೆಯಿಂದ ನೋಡಿ ಮತ್ತೆ ಚೆಂಡಾಡುತ್ತಾನೆ. ಮಾತಾಡುವುದಿಲ್ಲ.)
ದೀಪ್ತಿ:-ಕಿಶೋರ್, ಏನು ಸುಮ್ನೆ ಬಾಲ್ ಆಡ್ತಾನೇ ಇದೀಯಲ್ಲ. ಸುಮನ ಹೇಳಿದ್ದು ಕೇಳಿಸ್ಲಿಲ್ವಾ?